South Indian Bank Job Recruitment 2026 (Good news) – ಜೂನಿಯರ್ ಆಫೀಸರ್ / ಬಿಸಿನೆಸ್ ಪ್ರಮೊಷನ್ ಆಫೀಸರ್ ಹುದ್ದೆಗಳ ಸಂಪೂರ್ಣ ವಿವರ

Share the News

South Indian bank Job 2026

South Indian Bank Recruitment 2026 (Good News) ಜೂನಿಯರ್ ಆಫೀಸರ್ / ಬಿಸಿನೆಸ್ ಪ್ರಮೊಷನ್ ಆಫೀಸರ್:ಭಾರತದ ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಒಂದಾದ ಸೌತ್ ಇಂಡಿಯನ್ ಬ್ಯಾಂಕ್ 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಜೂನಿಯರ್ ಆಫೀಸರ್ (ಬಿಸಿನೆಸ್ ಪ್ರಮೊಷನ್ ಆಫೀಸರ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು  ಆಹ್ವಾನಿಸಿದೆ. ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಅನುಭವ ಹೊಂದಿರುವ ಯುವಕರಿಗೆ ಇದು ಉತ್ತಮ ಉದ್ಯೋಗ ಅವಕಾಶವಾಗಿದೆ. ಈ ಹುದ್ದೆ ಮುಖ್ಯವಾಗಿ ವ್ಯವಹಾರ ವೃದ್ಧಿ ಮತ್ತು ಸೇಲ್ಸ್ ಆಧಾರಿತ ಕೆಲಸವಾಗಿರುತ್ತದೆ.

ಪ್ರಮುಖ ದಿನಾಂಕಗಳು ವಿವರಗಳು (Important Dates Details)

  • ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: 20 ಫೆಬ್ರವರಿ 2026
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 02 ಮಾರ್ಚ್ 2026
  • ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಮಾತ್ರ ಅರ್ಜಿ ಸಲ್ಲಿಸಬೇಕು. 
  • ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಬಹಳ  ಉತ್ತಮ.

ನೇಮಕಾತಿ ಮಾಡಲಾಗುತ್ತಿರುವ ಹುದ್ದೆಯ ವಿವರಗಳು (Details of the position being recruited) 

  • ಜೂನಿಯರ್ ಆಫೀಸರ್/ಬಿಸಿನೆಸ್ ಪ್ರಮೊಷನ್ ಆಫೀಸರ್.
  • ಈ ಹುದ್ದೆ ಟಾರ್ಗೆಟ್ ಆಧಾರಿತ ಸೇಲ್ಸ್ ಹುದ್ದೆಗೆ  ಪಾತ್ರವಾಗಿದ್ದೆ.
  • ಹೊಸ ಗ್ರಾಹಕರ ಸೇರ್ಪಡೆಮಾಡುವುದು.
  • ಬ್ಯಾಂಕ್ ಉತ್ಪನ್ನಗಳ ಮಾರಾಟ, ಸಾಲ ಮತ್ತು ಠೇವಣಿ ಯೋಜನೆಗಳ ಪ್ರಚಾರ ಮಾಡುವುದು.
  • ಶಾಖೆಯ ವ್ಯವಹಾರ ವೃದ್ಧಿ ಕಾರ್ಯಗಳನ್ನು ನಿರ್ವಹಿಸ ಬೇಕಾಗುತ್ತದೆ.

 ಉದ್ಯೋಗದ  ವಿವರಗಳು (Job details) South Indian Bank Recruitment 2026

  • ಆರಂಭದಲ್ಲಿ 3 ವರ್ಷಗಳ ಒಪ್ಪಂದ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. 
  • ಅಭ್ಯರ್ಥಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನದ ಆಧಾರದ ಮೇಲೆ ಒಪ್ಪಂದ ವಿಸ್ತರಣೆ ಮಾಡುವ  ಸಾಧ್ಯತೆ ಇದೆ . 
  • ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳನ್ನು ಬ್ಯಾಂಕ್ ನಿಯಮಾನುಸಾರ ಭವಿಷ್ಯದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ (ಸ್ಕೇಲ್-I) ಹುದ್ದೆ  ನೀಡಬಹುದು.

ವಯೋಮಿತಿ ಅರ್ಹತೆಯ ವಿವರಗಳು (Age limit eligibility details) 

  • 31.01.2026ರಂತೆ ಗರಿಷ್ಠ 30 ವರ್ಷಗಳು ಮೀರಿರಬಾರದು. 
  • ಅಂದರೆ 01.02.1996 ನಂತರ ಜನಿಸಿದ ಅಭ್ಯರ್ಥಿಗಳು ಅರ್ಹರು.
  • SC/ST ಅಭ್ಯರ್ಥಿಗಳಿಗೆ 5 ವರ್ಷಗಳ ವಯೋ ಸಡಿಲಿಕೆ ಲಭ್ಯ.

ಶೈಕ್ಷಣಿಕ ಅರ್ಹತೆಯ ವಿವರಗಳು (Educational qualification details) 

ಯಾವುದೇ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು .

ಅನುಭವದ ವಿವರಗಳು (Experience details) 

ಬ್ಯಾಂಕ್, NBFC ಅಥವಾ ಹಣಕಾಸು ಸಂಸ್ಥೆಯಲ್ಲಿ ಕನಿಷ್ಠ 2 ವರ್ಷಗಳ ಅನುಭವ ಕಡ್ಡಾಯವಾಗಿ ಹೊಂದಿರಬೇಕು .

ವೇತನ ಮತ್ತು ಸೌಲಭ್ಯಗಳ ವಿವರಗಳು (Salary and benefits details)

  • ವಾರ್ಷಿಕ CTC: ₹7.56 ಲಕ್ಷ
  • ಫಿಕ್ಸ್ಡ್ ವೇತನ + ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ
  • ಆರೋಗ್ಯ ವಿಮೆ ಸೌಲಭ್ಯ
  • ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ ಸುಮಾರು ₹7.56 ಲಕ್ಷಗಳ ಒಟ್ಟು CTC ಈ ಹುದ್ದೆಗೆ  ನೀಡಲಾಗುತ್ತದೆ. 
  • ಇದರಲ್ಲಿ ಫಿಕ್ಸ್ಡ್ ವೇತನ, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಹಾಗೂ ಆರೋಗ್ಯ ವಿಮೆ ಸೇರಿವೆ. 
  • ಬ್ಯಾಂಕ್ ವತಿಯಿಂದ ಗುಂಪು ವೈದ್ಯಕೀಯ ವಿಮೆ ಮತ್ತು ಅಪಘಾತ ವಿಮೆ ಸೌಲಭ್ಯ ಒದಗಿಸಲಾಗುತ್ತದೆ. 
  • ಅಧಿಕೃತ ಕರ್ತವ್ಯ ಪ್ರಯಾಣಗಳಿಗೆ ಭತ್ಯೆ ನೀಡಲಾಗುತ್ತದೆ.

ಕೆಲಸದ ಸ್ಥಳದ  ವಿವರಗಳು (Workplace details)

  • ಭಾರತದ ಯಾವುದೇ ಭಾಗದಲ್ಲಿ ನೇಮಕಾತಿ ಆದೇಶ್ ಹೊರಡಿಸ ಬಹುದಾದ ಸಾಧ್ಯತೆಇದೆ .
  • ವರ್ಗಾವಣೆ :ಬ್ಯಾಂಕ್ ಅವಶ್ಯಕತೆ ಪ್ರಕಾರ ಎಲ್ಲಿಗೆ ಬೇಕಾದರೂ  ವರ್ಗಾವಣೆ ಮಾಡಬಹುದು.
  • ಸ್ಥಳೀಯ ಭಾಷಾ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ  ಆದ್ಯತೆ  ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ವಿವರಗಳು (Selection Process Details)

  • ಗ್ರೂಪ್ ಡಿಸ್ಕಷನ್: ಮೊದಲಿಗೆ ಅರ್ಜಿದಾರರ ಗುಂಪು ಚರ್ಚೆ ನಡೆಸಲಾಗುವುದು.
  • ಗ್ರೂಪ್ ಡಿಸ್ಕಷನ್ ಹಂತದಲ್ಲಿ ಆಯ್ಕೆಯಾದವರಿಗೆ ಮಾತ್ರ ಪರ್ಸನಲ್ ಇಂಟರ್ವ್ಯೂ ಅವಕಾಶ ದೊರೆಯುತ್ತದೆ. 
  • ಪರ್ಸನಲ್ ಇಂಟರ್ವ್ಯೂ:ಗುಂಪು ಚರ್ಚೆಯಲ್ಲ ಉತೀರ್ಣರಾದವರು ಭಾಗವಹಿಸಲು ಅರ್ಹರು.
  • ಗ್ರೂಪ್ ಡಿಸ್ಕಷನ್ ಹಂತದಲ್ಲಿ ಆಯ್ಕೆಯಾದವರಿಗೆ ಮಾತ್ರ ಸಂದರ್ಶನ ಅವಕಾಶ ದೊರೆಯುತ್ತದೆ. 
  • ಬ್ಯಾಂಕಿನ ತೀರ್ಮಾನ ಅಂತಿಮ ತಿರ್ಮಾನವಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ (How to apply)

  • ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
  • ಇತರೆ ಯಾವುದೇ ತರಹದ ವಿಧಾನ ಮಾನ್ಯವಾಗುವುದಿಲ್ಲ. 
  • ಸೌತ್ ಇಂಡಿಯನ್ ಬ್ಯಾಂಕಿಗ್ ಅಧಿಕೃತ ವೆಬ್ಸೈಟ್: www.southindianbank.bank.in
  • ಸರಿಯಾದ್ ಮಾಹಿತಿಯನ್ನು ಮಾತ್ರ ಸಲ್ಲಿಸಬೇಕು(ನಮೂದಿಸಬೇಕು)  
  • ಎಲ್ಲ ದಾಖಲಾತಿಗಳ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಬೇಕು 
  • ಅರ್ಜಿ ಸಲ್ಲಿಸುವ ಮೊದಲು ನಿಮ್ಮ್  ಇಮೇಲ್ ಐಡಿ ಹೊಂದಿರಬೇಕು. 
  • ಅರ್ಜಿ ಫಾರ್ಮ್‌ನಲ್ಲಿ ವೈಯಕ್ತಿಕ ಮಾಹಿತಿ ಹಾಗೂ  ಶೈಕ್ಷಣಿಕ ವಿವರಗಳು ಸರಿಯಾಗಿ ನಮೂದಿಸಬೇಕು.  
  • ತಮ್ಮ  ಅನುಭವದ ಮಾಹಿತಿಯ ಪ್ರತಿಯನ್ನು  ಸರಿಯಾಗಿ ನಮೂದಿಸಬೇಕು.
  • ಇತ್ತೀಚಿನ ಪಾಸಪೋರ್ಟ್ ಗಾತ್ರದ ಫೋಟೋ ಅಗತ್ಯ , ಸಹಿ, ರೆಸ್ಯೂಮೆ ಮತ್ತು ಶೈಕ್ಷಣಿಕ ದಾಖಲೆಗಳನ್ನು ನಿಗದಿತ ಗಾತ್ರದಲ್ಲಿ ಸರಿಯಾಗಿ ಜೋಡಿಸಿಡಬೇಕು  ಮತ್ತು ಸರಿಯಾದ ಫಾರ್ಮೆಟ್ನಲ್ಲಿ  ಅಪ್ಲೋಡ್ ಮಾಡಬೇಕು. 
  • ಒಮ್ಮೆ ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ತರಹದ  ತಿದ್ದುಪಡಿ ಅವಕಾಶ ಇರುವುದಿಲ್ಲ. 
  • ಒಂದೇ ಹುದ್ದೆಗೆ ಅನೇಕ ಬಾರಿ ಅರ್ಜಿ ಸಲ್ಲಿಸಿದರೆ ಅನರ್ಹತೆ ಉಂಟಾಗಬಹುದು.

ಪ್ರಶ್ನೋತ್ತರಗಳು (Questions and answers)

1.  ಈ ಹುದ್ದೆಗೆ ಅರ್ಜಿ ಹಾಕಲು ಎಷ್ಟು ಅನುಭವ ಅಗತ್ಯ?

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬ್ಯಾಂಕ್, NBFC ಅಥವಾ ಇತರೆ ಹಣಕಾಸು ಸಂಸ್ಥೆಗಳಲ್ಲಿ ಕನಿಷ್ಠ ಎರಡು ವರ್ಷದ ಪ್ರಾಯೋಗಿಕ ಕೆಲಸದ ಅನುಭವ ಹೊಂದಿರಬೇಕು. ಸೇಲ್ಸ್ ಅಥವಾ ವ್ಯವಹಾರ ವೃದ್ಧಿ ಕ್ಷೇತ್ರದ ಅನುಭವ ಇದ್ದರೆ ಹೆಚ್ಚಿನ ಪ್ರಯೋಜನವಾಗುತ್ತದೆ.

2.ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?

ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ 02 ಮಾರ್ಚ್ 2026ರೊಳಗೆ ಸಲ್ಲಿಸಬೇಕು.

3.ಇದು ಸರ್ಕಾರಿ ಉದ್ಯೋಗವೇ ಅಥವಾ ಖಾಸಗಿ ಉದ್ಯೋಗವೇ?

ಇದು ಖಾಸಗಿ ವಲಯಕ್ಕೆ ಸೇರಿದ ಬ್ಯಾಂಕ್ ಉದ್ಯೋಗವಾಗಿದೆ. ನೇಮಕಾತಿಯನ್ನು ನಡೆಸುತ್ತಿರುವುದು South Indian Bank ಆಗಿದ್ದು, ಇದು ಭಾರತದ ಪ್ರಸಿದ್ಧ ಖಾಸಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಒಂದಾಗಿದೆ.

4.ಈ ಹುದ್ದೆ ಶಾಶ್ವತ ಉದ್ಯೋಗವೇ?

ಪ್ರಾರಂಭದಲ್ಲಿ ಇದು ಒಪ್ಪಂದ ಆಧಾರಿತ ನೇಮಕಾತಿಯಾಗಿರುತ್ತದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ಅವಕಾಶಗಳು ಲಭ್ಯವಾಗಬಹುದು.

ಸಾಮಾನ್ಯ ನಿಯಮಗಳು (General rules)

  • ಅಭ್ಯರ್ಥಿಗಳು ನೀಡುವ ಮಾಹಿತಿ ಸರಿಯಾಗಿರಬೇಕು. ತಪ್ಪು ಮಾಹಿತಿ ಕಂಡುಬಂದರೆ ನೇಮಕಾತಿ ರದ್ದುಪಡಿಸಲಾಗುತ್ತದೆ. 
  • ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಪರಿಶೀಲನೆಗೆ ಒಳಪಡುವರು.
  • ಮಾನಸಿಕ ಪರೀಕ್ಷೆ ಹಾಗೂ ಹಿನ್ನೆಲೆ ಪರಿಶೀಲನೆಗೆ ಒಳಪಡುವರು. 

ಮುಖ್ಯ ಸೂಚನೆ (Important note)

  • ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. 
  • ನಕಲಿ ಉದ್ಯೋಗ ಸೂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು.
  • ಬ್ಯಾಂಕ್ ಯಾವುದೇ ತರಹದ್ ಮೂರನೇ ವ್ಯಕ್ತಿಯಿಂದ್ ಹಣದ ಬೇಡಿಕೆಯೊಂದಿಗೆ ನೇಮಕಾತಿ ಮಾಡುವುದಿಲ್ಲ .
  • ಮುಂದಿನ ದಿನಗಳಲ್ಲಿ ಬರುವ ಮಾಹಿತಿಗಾಗಿ ಅಧಿಕೃತ್ ವೆಬ್‌ಸೈಟ್ ವೀಕ್ಷಣೆ ಮಾಡಬೇಕು. 
  • ಬ್ಯಾಂಕ್ ಸಂಬಂಧಿಸಿದ ಎಲ್ಲಾ ಮಾಹಿತಿ ಅಧಿಕೃತ ಚಾನೆಲ್‌ಗಳ ಮೂಲಕ ಮಾತ್ರ ಪ್ರಕಟಿಸಲಾಗುತ್ತದೆ.

ಪ್ರಮುಖ ಲಿಂಕಗಳು (Important links)

ಅಧಿಕೃತ ಅಧಿಸೂಚನೆ  :https://surl.li/nwvxiy

ಅರ್ಜಿ ಸಲ್ಲಿಸುವ ಲಿಂಕ್:https://recruit.southindianbank.bank.in/RDC/    

ಅಧಿಕೃತ ವೆಬ್ಸೈಟ್ ಲಿಂಕ್: https://www.southindianbank.bank.in/

 

ಪಶ್ಚಿಮ ರೈಲ್ವೆ(Western Railway)ಅಪ್ರೆಂಟಿಸ್ ನೇಮಕಾತಿ 2026 – 5349 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
https://news24kannada.in/western-railway/

Share the News

Leave a Comment

Your email address will not be published. Required fields are marked *