Heart Blockage:ಇಂದಿನ ವೇಗದ ಜೀವನಶೈಲಿ, ಫಾಸ್ಟ್‌ಫುಡ್ ಅಭ್ಯಾಸ, ಹೊರಗಿನ ತಿಂಡಿ–ತಿನಿಸುಗಳ ಹೆಚ್ಚಳ ಮತ್ತು ದೈಹಿಕ ಚಟುವಟಿಕೆ ಕೊರತೆ ಇವುಗಳೆಲ್ಲವು ಹೃದಯ ಸಂಬಂಧಿತ ರೋಗಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ವಿಶೇಷವಾಗಿ ಹೆಚ್ಚು ಎಣ್ಣೆ ಬಳಕೆ ಹೃದಯದಲ್ಲಿ ಕೊಬ್ಬಿನ ಪದರ (ಪ್ಲಾಕ್) ಜಮೆಯಾಗಲು ಕಾರಣವಾಗಿ “ಹೃದಯ ಬ್ಲಾಕೇಜ್” ಸಮಸ್ಯೆಯನ್ನು ಉಂಟುಮಾಡಬಹುದು. ಈ ಲೇಖನದಲ್ಲಿ ಹೆಚ್ಚು ಎಣ್ಣೆ ಸೇವನೆ ಹೇಗೆ ಹೃದಯ ಬ್ಲಾಕೇಜ್‌ಗೆ ಕಾರಣವಾಗುತ್ತದೆ, ಅದರ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಆರೋಗ್ಯಕರ ಆಯ್ಕೆಗಳು ಕುರಿತು ವಿವರವಾಗಿ ತಿಳಿದುಕೊಳ್ಳೋಣ.
ಹೆಚ್ಚು ಎಣ್ಣೆ ತಿನ್ನುವುದು ಹೃದಯಕ್ಕೆ ಹಾನಿಕಾರಕವೇ? ಈ ಪ್ರಶ್ನೆ ಬಹಳ ಸಾಮಾನ್ಯ. ಆದರೆ ಇದರ ಉತ್ತರ ಸರಳ “ಹೌದು” ಅಥವಾ “ಇಲ್ಲ” ಎಂಬುದಲ್ಲ. ಹೃದಯ ಸಂಬಂಧಿತ ಕಾಯಿಲೆಗಳು ಹಲವಾರು ಅಂಶಗಳ ಒಟ್ಟುಗೂಡಿದ ಪರಿಣಾಮ. ಎಣ್ಣೆಯ ಪ್ರಮಾಣ, ಅದರ ಗುಣಮಟ್ಟ, ಅಡುಗೆ ವಿಧಾನ, ಜೀವನಶೈಲಿ, ವ್ಯಾಯಾಮದ ಕೊರತೆ, ಒತ್ತಡ, ಮಧುಮೇಹ, ರಕ್ತದೊತ್ತಡ. ಕೆಳಗಿನ ವಿಷಯಗಳನ್ನು ಪಾಯಿಂಟ್‌ವಾರಿಯಾಗಿ ತಿಳಿದುಕೊಳ್ಳೋಣ.
- “ಹೃದಯ ಬ್ಲಾಕೇಜ್” (Heart Blockage) ಎಂದರೇನು?
- ವೈದ್ಯಕೀಯವಾಗಿ ಇದನ್ನು Coronary artery disease ಎಂದು ಕರೆಯುತ್ತಾರೆ.
- ಇದು ಸಾಮಾನ್ಯವಾಗಿ Atherosclerosis ಎಂಬ ಪ್ರಕ್ರಿಯೆಯಿಂದ ಉಂಟಾಗುತ್ತದೆ.
- ಅಪಧಮನಿಗಳ ಒಳಭಾಗದಲ್ಲಿ ಕೊಬ್ಬು, ಕೊಲೆಸ್ಟ್ರಾಲ್, ಉರಿಯೂತದ ಕಣಗಳು ಸೇರಿ “ಪ್ಲಾಕ್” ಎಂಬ ಪದರ ರಚಿಸುತ್ತವೆ.
- ಈ ಪದರ ನಿಧಾನವಾಗಿ ರಕ್ತನಾಳಗಳನ್ನು ಕಿರಿದಾಗಿಸುತ್ತದೆ.
- ಪ್ಲಾಕ್ ಸಿಡಿದರೆ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿ ಹೃದಯಾಘಾತ ಸಂಭವಿಸಬಹುದು.
- ಎಣ್ಣೆಯ ಪಾತ್ರ ಏಕೆ ಬಹಳ್ ಚರ್ಚೆ ಆಗುತ್ತದೆ?
- ಎಣ್ಣೆಯಲ್ಲಿ ಕೊಬ್ಬು ಅಂಶ ಹೆಚ್ಚು.
- ಕೆಲವು ಕೊಬ್ಬುಗಳು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಿಸಬಹುದು.
- LDL ಹೆಚ್ಚಾದರೆ ಅಪಧಮನಿಗಳಲ್ಲಿ ಪ್ಲಾಕ್ ರಚನೆಗೆ ನೆರವಾಗಬಹುದು.
- ಆದರೆ ಎಲ್ಲಾ ಎಣ್ಣೆಗಳು ಒಂದೇ ರೀತಿಯಲ್ಲ.
- ಎಲ್ಲಾ ಕೊಬ್ಬುಗಳು ಹಾನಿಕಾರಕವೇ?
ಅಪಾಯಕಾರಿ ಕೊಬ್ಬುಗಳು (Dangerous cholesterol)
- ಸ್ಯಾಚುರೇಟೆಡ್ ಫ್ಯಾಟ್ (ಬೆಣ್ಣೆ, ತುಪ್ಪ, ಪಾಮ್ ಎಣ್ಣೆ, ಕೊಬ್ಬಿನ ಕೆಂಪು ಮಾಂಸ)
- ಟ್ರಾನ್ಸ್ ಫ್ಯಾಟ್ (ಬೇಕರಿ ಪದಾರ್ಥಗಳು, ಪ್ಯಾಕೇಜ್ಡ್ ಸ್ನ್ಯಾಕ್ಸ್, ಮರುಬಳಕೆ ಮಾಡಿದ ಎಣ್ಣೆ)
- ಇವು LDL ಹೆಚ್ಚಿಸಿ HDL (ಒಳ್ಳೆಯ ಕೊಲೆಸ್ಟ್ರಾಲ್) ಕಡಿಮೆ ಮಾಡಬಹುದು.
ಆರೋಗ್ಯಕರ ಕೊಬ್ಬುಗಳು (Health cholesterol)
- ಅಪರ್ಯಾಪ್ತ ಕೊಬ್ಬುಗಳು (ಮೋನೋ ಮತ್ತು ಪೋಲಿ ಅನ್ಸ್ಯಾಚುರೇಟೆಡ್ ಫ್ಯಾಟ್ಸ್)
- ಸಾಸಿವೆ ಎಣ್ಣೆ, ನೆಲಗಡಲೆ ಎಣ್ಣೆ, ಆಲಿವ್ ಎಣ್ಣೆ, ಬೀಜಗಳು
- ಇವು HDL ಮಟ್ಟವನ್ನು ಬೆಂಬಲಿಸುತ್ತವೆ.
- ಮಿತ ಪ್ರಮಾಣದಲ್ಲಿ ಬಳಸಿದರೆ ಹೃದಯಾರೋಗ್ಯಕ್ಕೆ ಸಹಕಾರಿ.
- ಫಾಸ್ಟ ಫುಡ್ ಅಪಾಯಕಾರಿ ಯಾಕೆ?
- ಆಳವಾಗಿ ಹುರಿದ ಆಹಾರಗಳಲ್ಲಿ ಹೆಚ್ಚಿನ ಕ್ಯಾಲೊರಿಗಳು.
- ಮರುಬಳಕೆ ಎಣ್ಣೆಯಲ್ಲಿ ಆಕ್ಸಿಡೀಕೃತ ಸಂಯುಕ್ತಗಳು ಉತ್ಪತ್ತಿಯಾಗುತ್ತವೆ.
- ಇವು ರಕ್ತನಾಳಗಳಿಗೆ ಹಾನಿ ಮಾಡಬಹುದು.
- ಉರಿಯೂತ ಹೆಚ್ಚಿಸಿ ಪ್ಲಾಕ್ ರಚನೆಯನ್ನು ವೇಗಗೊಳಿಸಬಹುದು.
- ಎಣ್ಣೆ ಮಾತ್ರವೇ ಕಾರಣವೇ?
- ಇಲ್ಲ. ಹೃದಯ ಕಾಯಿಲೆ ಒಂದು ಬಹು–ಕಾರಕ (multi-factorial) ಸಮಸ್ಯೆ.
- ಆಹಾರ + ವ್ಯಾಯಾಮದ ಕೊರತೆ + ಒತ್ತಡ + ನಿದ್ರೆ =ಹಾರ್ಟ್ ಬ್ಲಾಕೇಜ್
- ಕೇವಲ ಎಣ್ಣೆಯನ್ನು ದೂಷಿಸುವುದು ಸರಿಯಲ್ಲ.
- ಹೆಚ್ಚುವರಿ ಅಪಾಯಕಾರಿ ಅಂಶಗಳು
- ಜೀವನಶೈಲಿ
- ಧೂಮಪಾನ
- ಅಧಿಕ ರಕ್ತದೊತ್ತಡ
- ಮಧುಮೇಹ
- ಹೆಚ್ಚಿದ ತೂಕ
- ದೀರ್ಘಕಾಲದ ಒತ್ತಡ
- ಕಳಪೆ ನಿದ್ರೆ
- ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ
- ಎಣ್ಣೆಯು ಕಡಿಮೆ ಪ್ರಮಾಣಬಳಕೆ ಏಕೆ ಮುಖ್ಯ?
- ಯಾವುದೇ ಎಣ್ಣೆಯಾದರೂ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡರೆ ಕ್ಯಾಲೊರಿ ಹೆಚ್ಚಾಗುತ್ತದೆ.
- ಅಧಿಕ ಕ್ಯಾಲೊರಿ → ತೂಕ ಹೆಚ್ಚಳ → ಇನ್ಸುಲಿನ್ ಪ್ರತಿರೋಧ → ಮಧುಮೇಹ ಅಪಾಯ.
- ಮಧುಮೇಹ ಮತ್ತು ರಕ್ತದೊತ್ತಡ ಇದ್ದರೆ ಹೃದಯ ಕಾಯಿಲೆಯ ಅಪಾಯ ಹೆಚ್ಚುತ್ತದೆ.
8. ಆರಂಭಿಕ ಲಕ್ಷಣಗಳು ಯಾವುವು?
- ಎದೆನೋವು (Chest Pain)
- ಉಸಿರಾಟದ ತೊಂದರೆ (Difficulty Breathing)
- ಕೈ ಅಥವಾ ಕುತ್ತಿಗೆಯ ನೋವು (Arm or neck pain)
- ಹೆಚ್ಚು ದಣಿವು (More Fatigue)
- ಕೆಲವರಿಗೆ ಯಾವುದೇ ಲಕ್ಷಣಗಳಿಲ್ಲ
ನಿಯಮಿತ ಆರೋಗ್ಯ ತಪಾಸಣೆ ಮಾಡುವುದುರಿಂದ್ ಹೃದಯ ಸಮಸ್ಯೆ ಬರುವುದಿಲ.
9.ಹೃದಯ ರಕ್ಷಣೆಗಾಗಿ ಅನುಸರಿಸಬಹುದಾದ ಕ್ರಮಗಳು
- ದಿನವೂ ಕನಿಷ್ಠ 30 ನಿಮಿಷ ವ್ಯಾಯಾಮ್ ಮಾಡಬೇಕು
- ಕೆಡಿಮೆ ಪ್ರಮಾಣದಲ್ಲಿ ಎಣ್ಣೆ ಬಳಕೆ ಮಾಡಬೇಕು
- ಹುರಿದ ಆಹಾರ ಕಡಿಮೆ ಮಾಡುವುದು
- ಮರುಬಳಕೆ ಎಣ್ಣೆ ತಪ್ಪಿಸುವುದು
- ಧೂಮಪಾನ ಬಿಡುವುದು ಒಳೆಯದು
- ಒತ್ತಡ ನಿಯಂತ್ರಣ (ಯೋಗ, ಧ್ಯಾನ ಹಾಗು ಸ್ಫೋರ್ಟ್ಸ್ )
- ಸಾಕಷ್ಟು ನಿದ್ರೆ ಮಾಡಬೇಕು
ನಿಯಮಿತ ಕೊಲೆಸ್ಟ್ರಾಲ್ ಮತ್ತು ಶುಗರ್ ಪರೀಕ್ಷೆ ಮಾಡಿಸುವುದ್ ಅಗತ್ಯ ವಾಗಿದೆ
10.ಎಷ್ಟು ಎಣ್ಣೆ ಸುರಕ್ಷಿತ?
- ಸಾಮಾನ್ಯವಾಗಿ ಪ್ರತಿದಿನ 3–4 ಟೀ ಸ್ಪೂನ್ (ವೈಯಕ್ತಿಕ ಅವಶ್ಯಕತೆ ಅನುಸಾರ ಬದಲಾಗುತ್ತದೆ)
- ಬೇರೆ ಬೇರೆ ಎಣ್ಣೆಗಳನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯವಾಗಿದೆ.
- ಹುರಿಯುವ ಬದಲು ಬೇಯಿಸುವುದು, ಆವಿಯಲ್ಲಿ ಬೇಯಿಸುವುದು ಉತ್ತಮ
11. ಒಮ್ಮೆಮೆತಿಂದರೇ ಅಪಾಯವೇ?
- ಸಾಂದರ್ಭಿಕವಾಗಿ ತಿನ್ನುವುದುರಿಂದ್ ತಕ್ಷಣ ಹೃದಯಾಘಾತಕ್ಕೆ ಕಾರಣವಾಗುವುದಿಲ್ಲ.
- ದೀರ್ಘಕಾಲದ ಅನಾರೋಗ್ಯಕರ ಆಹಾರ ಪದ್ಧತಿ ಅಪಾಯ ಹೆಚ್ಚಿಸುತ್ತದೆ.
- ಒಮ್ಮೆಮೆತಿಂದರೇ ಯಾವುದೆ ತರಹದ್ ಹಾನಿಯಾಗುವುದಿಲ.
ಸರಿಯಾದ್ ಸಮಯಕ್ಕೆ ಚಿಕಿತ್ಸೆ ಮಹತ್ವ
ಹೃದಯ ಬ್ಲಾಕೇಜ್ ಗಂಭೀರ ಸಮಸ್ಯೆಯಾಗಿದ್ದರೂ, ಸಮಯಕ್ಕೆ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆದರೆ ಅಪಾಯವನ್ನು ಕಡಿಮೆ ಮಾಡಬಹುದು. ಹಲವರು ಲಕ್ಷಣಗಳನ್ನು ಸರಳವಾಗಿ ತೆಗೆದುಕೊಳ್ಳುವುದರಿಂದ ದೊಡ್ಡ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ ಯಾವುದೇ ಎದೆನೋವು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಪರೀಕ್ಷೆಗಳು ಮತ್ತು ಚಿಕಿತ್ಸೆ
ಹೃದಯ ಬ್ಲಾಕೇಜ್ ಅನ್ನು ಪತ್ತೆಹಚ್ಚಲು ವೈದ್ಯರು ವಿವಿಧ ಪರೀಕ್ಷೆಗಳನ್ನು ಸೂಚಿಸುತ್ತಾರೆ:
ECG (ಎಲೆಕ್ಟ್ರೋಕಾರ್ಡಿಯೋಗ್ರಾಮ್)
TMT (ಟ್ರೆಡ್‌ಮಿಲ್ ಟೆಸ್ಟ್)
ಇಕೋಕಾರ್ಡಿಯೋಗ್ರಫಿ
ಆಂಜಿಯೋಗ್ರಾಮ್
ಪ್ರಮುಖ ಸಂದೇಶ (Important message)
- ಎಣ್ಣೆ ಮಾತ್ರವೇ ಶತ್ರು ಅಲ್ಲ.
- ಅತಿಯಾದ ಹೆಚ್ಚಿನ ಪ್ರಮಾಣ ಎಣ್ಣೆ ಬಳಸುವುದು ಮತ್ತು ತಪ್ಪಾದ ರೀತಿಯ ಬಳಕೆ ಸಮಸ್ಯೆ.
- ಸಮತೋಲನ ಆಹಾರ + ಒಳ್ಳೆಯ್ ಜೀವನಶೈಲಿ = ಉತ್ತಮ ಹೃದಯ ಆರೋಗ್ಯ
- ನಿಯಂತ್ರಿತ ಕೊಬ್ಬು ಸೇವನೆ ದೇಹಕ್ಕೆ ಅಗತ್ಯ.
ಸಾರಾಂಶ (Summary)
- ಹೃದಯ ಕಾಯಿಲೆ ಒಂದು ದಿನದಲ್ಲಿ ಉಂಟಾಗುವುದಿಲ್ಲ. ಅದು ವರ್ಷಗಳ ಜೀವನಶೈಲಿ, ಆಹಾರ ಪದ್ಧತಿ ಮತ್ತು ಆರೋಗ್ಯ ನಿರ್ಲಕ್ಷ್ಯದ ಫಲಿತಾಂಶ. ಎಣ್ಣೆಯುಕ್ತ ಆಹಾರವನ್ನು ಸಂಪೂರ್ಣವಾಗಿ ಬಿಡಬೇಕೆಂಬ ಅಗತ್ಯವಿಲ್ಲ, ಆದರೆ ಪ್ರಮಾಣ, ಗುಣಮಟ್ಟ ಮತ್ತು ಅಡುಗೆ ವಿಧಾನವನ್ನು ಗಮನಿಸಬೇಕು. ಸಮತೋಲನ, ನಿಯಮಿತ ವ್ಯಾಯಾಮ ಮತ್ತು ವೈದ್ಯಕೀಯ ತಪಾಸಣೆ—ಇವುಗಳ ಸಂಯೋಜನೆ ಹೃದಯವನ್ನು ರಕ್ಷಿಸಲು ಸಹಕಾರಿ.
- ಹೃದಯ ಬ್ಲಾಕೇಜ್ ಗಂಭೀರ ಸಮಸ್ಯೆಯಾಗಿದ್ದರೂ, ಸಮಯಕ್ಕೆ ಸರಿಯಾಗಿ ಪತ್ತೆ ಹಚ್ಚಿದರೆ ನಿಯಂತ್ರಿಸಬಹುದಾಗಿದೆ. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ವೈದ್ಯರ ಸಲಹೆಯನ್ನು ಪಾಲಿಸುವುದರಿಂದ ಹೃದಯವನ್ನು ರಕ್ಷಿಸಬಹುದು. ಯಾವುದೇ ಲಕ್ಷಣ ಕಂಡುಬಂದರೆ ಸ್ವಯಂ ಚಿಕಿತ್ಸೆ ಮಾಡದೇ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
- ಆರೋಗ್ಯಕರ ಆಯ್ಕೆಗಳನ್ನು ಇಂದು ಪ್ರಾರಂಭಿಸಿದರೆ, ನಾಳೆಯ ಹೃದಯ ಹೆಚ್ಚು ಸುರಕ್ಷಿತವಾಗಿರುತ್ತದೆ.
ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ.


